ಆತ್ಮಹತ್ಯೆ ತಡೆಗಟ್ಟುವಿಕೆ: ನಮ್ಮ ನಡುವಳಿಕೆ ಭರವಸೆದಾಯಕವಾಗಿರಲಿ


 ಆತ್ಮಹತ್ಯೆ ಮಾನವಕುಲದ ಅತ್ಯಂತ ಸಂಕೀರ್ಣವಾದ ಮಾನಸಿಕ ಸಾಮಾಜಿಕ ಸಮಸ್ಯೆಗಳಲ್ಲಿ ಒಂದಾಗಿದೆ. WHO ಪ್ರಕಾರ, ಜಾಗತಿಕವಾಗಿ ಪ್ರತಿವರ್ಷ 800,000 ಕ್ಕೂ ಹೆಚ್ಚು ಜನರು ಆತ್ಮಹತ್ಯೆಯಿಂದ ಸಾಯುತ್ತಾರೆ. ಆತ್ಮಹತ್ಯೆಗೆ ವಿವಿಧ ಕಾರಣಗಳಿವೆ, ಇದನ್ನು ವಿಶಾಲವಾಗಿ ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಕಾರಣಗಳಾಗಿ ವರ್ಗೀಕರಿಸಬಹುದು. ಜೈವಿಕ ಕಾರಣಗಳಲ್ಲಿ  ಜೆನೆಟಿಕ್ಸ್ (ಹೌದು !! ಆತ್ಮಹತ್ಯೆ ಕೆಲವೊಮ್ಮೆ ವಂಶಪಾರಂಪರ್ಯವಾಗಿರಬಹುದು), ಮೆದುಳಿನಲ್ಲಿ ರಾಸಾಯನಿಕ ಏರುಪೇರುಗಳು ಪ್ರಮುಖವಾಗಿವೆ . ಮಾನಸಿಕ ಕಾರಣಗಳೆಂದರೆ ಅತಿಯಾದ ಮಹತ್ವಾಕಾಂಕ್ಷೆ , ವೈಫಲ್ಯಗಳಿಂದ ಬಹು ಬೇಗ  ಕುಗ್ಗಿಹೋಗುವದು, ಮುಂಗೋಪಿತನ, ಇತ್ಯಾದಿ ಸಾಮಾಜಿಕ ಕಾರಣಗಳಲ್ಲಿ  ಶೈಕ್ಷಣಿಕ ತೊಂದರೆಗಳಿಂದ ಹಿಡಿದು ಪ್ರೀತಿಯ ವೈಫಲ್ಯದಿಂದ ಸಂಕೀರ್ಣ ಸಾಮಾಜಿಕ ಸಮಸ್ಯೆಗಳು ಆತ್ಮಹತ್ಯೆಗೆ ಕರಣ ಆಗಬಹುದು.

ಆತ್ಮಹತ್ಯೆಗೂ ಮಾನಸಿಕ ಖಾಯಿಲೆಗೂ ನಿಕಟ ಸಂಬಂಧವಿದೆ. ಹೆಚ್ಚಿನ ಆತ್ಮಹತ್ಯೆಗಳು ಖಿನ್ನತೆ ಮತ್ತು ವ್ಯಸನದಂತಹ ಮಾನಸಿಕ ಸಮಸ್ಯೆಗಳಿಗೆ ಸಂಬಂಧಿಸಿವೆ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ ಹಾಗಾಗಿ ನಾವು ಯಾವುದೇ ಹಿಂಜರಿಕೆಯಿಲ್ಲದೆ ಮಾನಸಿಕ ಆರೋಗ್ಯದ ಬಗ್ಗೆ  ಮಾತನಾಡುವುದು ಬಹಳ ಮುಖ್ಯ.

ವರ್ಷದ ಆತ್ಮಹತ್ಯೆ ತಡೆಗಟ್ಟುವ ದಿನವನ್ನು ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತಿದೆ , ಹಾಗೂ, ವರ್ಷದ ಧ್ಯೇಯವಾಕ್ಯ "ನಮ್ಮ ನಡುವಳಿಕೆಯ ಮುಖಾಂತರ ಭರವಸೆಯನ್ನು ಸೃಷ್ಟಿಸುವದು" ಎಂಬುದಾಗಿದೆ. ಹಾಗಿದ್ದರೆ ನಮ್ಮ ನಡುವಳಿಕೆ ಮುಖೆನ ಹೇಗೆ ಆತ್ಮಹತ್ಯೆಯ ಹೊಸ್ತಿಲಲ್ಲಿ ನಿಂತವರಲ್ಲಿ ಭರವಸೆ ಮೂಡಿಸಬಹುದು ಎಂದು ನೋಡೋಣ:

ಆತ್ಮಹತ್ಯೆಯ ಬಗ್ಗೆ ವಿಚಾರಿಸುತ್ತಿರುವ ವ್ಯಕ್ತಿಯು  ವ್ಯಕ್ತಿಯು  ದುಃಖ, ನಿರಾಸಕ್ತಿ, ನಿಷ್ಪ್ರಯೋಜಕತೆ, ಖಾಲಿತನ ಮತ್ತು ಹತಾಶತೆಯ ಭಾವನೆಗಳೊಂದಿಗೆ ನಿರಂತರವಾಗಿ ಹೋರಾಡುತ್ತಿರುತ್ತಾನೆ . ಇಂತಹ ಸಂದರ್ಭದಲ್ಲಿ, ವ್ಯಕ್ತಿಗೆ ಸಹಾಯ ಹಸ್ತವಾಗಬಹುದಾದ ಕೆಲವು ಕ್ರಮಗಳು ಇಲ್ಲಿವೆ.

1. ಮೊದಲನೆಯದಾಗಿ, ನಾನು ನಿನ್ನೊಂದಿಗಿದ್ದೇನೆ ಎಂಬ ಭರವಸೆ ಮೂಡಿಸುವದು

2. ಯಾರಾದರೂ ಆತ್ಮಹತ್ಯೆಯ ವಿಚಾರ ಹಂಚಿಕೊಂಡಾಗ ಅದನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ.

3. ವ್ಯಕ್ತಿಯ ಸಮಸ್ಯೆಗಳನ್ನು  ಸಕ್ರಿಯವಾಗಿ ಆಲಿಸಿ. ಇದು ನೀವು ತೋರಿಸುವ ಕಾಳಜಿ ಮತ್ತು ಬೆಂಬಲದ ಸಂಕೇತವಾಗಿದೆ.

4. ಸಾಧ್ಯವಾದರೆ ಆತನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

5. ವ್ಯಕ್ತಿಯೊಂದಿಗೆ ಮಾತನಾಡುವಾಗ ನೀವು ಬಳಸುವ ಪದಗಳ ಮೇಲೆ ನಿಗಾ ಇರಲಿ. ವ್ಯಕ್ತಿಯಲ್ಲಿ ನಿರಾಶೆ ಹತಾಶೆ ಹುಟ್ಟುವಂತಹ ಪದಗಳನ್ನು ಬಳಸಬೇಡಿ.

6. ಆತ್ಮಹತ್ಯಾ ಆಲೋಚನೆಗಳನ್ನು ಹೊಂದಿರುವ ವ್ಯಕ್ತಿಯನ್ನು ಏಕಾಂಗಿಯಾಗಿ ಬಿಡಬಾರದು, ಯಾರಾದರೂ ನಂಬಿಗೆಸ್ಥರು ಅವರೊಂದಿಗೆ ಇರಬೇಕು.

7. ಅಗತ್ಯವಿದ್ದಾಗ ವ್ಯಕ್ತಿಯನ್ನುಮನೋರೋಗ ತಜ್ಞರ  ಬಳಿಗೆ ಕರೆದುಕೊಂಡು ಹೋಗುವುದು .

ವೃತ್ತಿಪರ ಸಹಾಯವನ್ನು ಯಾವಾಗ ಪಡೆಯಬೇಕು?

1.  ನಿರಂತರವಾಗಿ ಆತ್ಮಹತ್ಯೆಯ ಆಲೋಚನೆ ಬಂದಾಗ ತಕ್ಷಣ ಸಹಾಯ ಪಡೆಯಿರಿ

2. ವ್ಯಕ್ತಿಯು ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದರೆ.

3.  ವ್ಯಕ್ತಿಯು ತನ್ನ ಆತ್ಮಹತ್ಯೆಯ ಪ್ರಯತ್ನದ ಬಗ್ಗೆ ಯಾವುದೇ ಪಶ್ಚಾತ್ತಾಪವನ್ನು ತೋರಿಸದಿದ್ದರೆ.

ತಜ್ಞರ ಸಲಹೆ  ತೆಗೆದುಕೊಳ್ಳುವುದು ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಸಮಸ್ಯೆಯನ್ನು ನಿಭಾಯಿಸಲು ಮತ್ತು ಧನಾತ್ಮಕ ರೀತಿಯಲ್ಲಿ ನಿಭಾಯಿಸಲು

ಸಾಧ್ಯವಾಗುತ್ತದೆ.

ಬನ್ನಿ ಸಹಾಯ ಹಸ್ತ ಚಾಚೋಣ, ಭರವಸೆಯ ಬೆಳಕು ಮೂಡಿಸೋಣ.

Comments

Popular posts from this blog

Mental health and COVID-19: The questions that haunt

COVID and Mental health: Being Positive In Midst of “Positive”s

How Diabetes Impact our Psychological Health