Posts

Showing posts from October, 2021

"ಹೆಣ್ಮಕ್ಕಳಲ್ಲೇ ಮನೋರೋಗಗಳು ಹೆಚ್ಚಾ ಸಾರ್?"

Image
  ಈ ಪ್ರಶ್ನೆ ಕಿವಿಗೆ ಬಿದ್ದಾಗ ನನಗೆ ಕಿರಿಕಿರಿ ಆಗಿದ್ದು ಸಹಜ. ನನ್ನ ಜೊತೆಗಿದ್ದ ಹುಡುಗಿ, ನನ್ನ ಸಹಾಯಕ ವೈದ್ಯೆಯ ಸಿಟ್ಟು ಯಾರಿಗಾದರೂ ಗೋಚರವಾಗುವಂತಿತ್ತು. ಈ ಪ್ರಶ್ನೆ ಕೇಳಿದ್ದು ಒಬ್ಬ ಉಪದ್ಯಾಪಿ ಗಂಡಸು. ಅದೂ ಡಿಪ್ರೆಶನ್ ನಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಹೀಯಾಳಿಸುವ ಭರದಲ್ಲಿ. ನನ್ನ ಕಿರಿಕಿರಿಯನ್ನು ತೋರಗೊಡದೆ ಆದಷ್ಟು ಸಂಯಮದಿಂದ ನಾನು ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿದೆ. ಎಲ್ಲಾ  ಮಾನಸಿಕ ರೋಗಗಳೂ ಹೆಣ್ಣುಮಕ್ಕಳಲ್ಲೇ ಹೆಚ್ಚಾಗಿ ಕಂಡು ಬರುತ್ತವೆ ಎಂಬುದು ಶುದ್ಧ ಸುಳ್ಳು, ಕೆಲವೊಂದು ರೋಗಗಳು ಪುರುಷರಲ್ಲೇ ಹೆಚ್ಚಾಗಿರುತ್ತವೆ ಎಂದೂ, ಹಾಗೂ ಹೆಣ್ಣುಮಕ್ಕಳಲ್ಲಿ ಕೆಲವೊಂದು ರೋಗಗಳು ಹೆಚ್ಚಾಗಿ ಕಂಡುಬಂದರೆ ಅದಕ್ಕೆ ಪ್ರಕೃತಿದತ್ತವಾಗಿ ಬಂದ ಕೆಲವೊಂದು ಜೈವಿಕ ತಾರತಮ್ಯಗಳು ಕಾರಣವಾದರೆ ಇನ್ನೂ ಕೆಲವೊಮ್ಮೆ ಸ್ತ್ರೀಯರು ಅನಾದಿ ಕಾಲದಿಂದಲೂ ಅನುಭವಿಸುತ್ತಿರುವ ಸಾಮಾಜಿಕ ಅಸಮಾನತೆ ಕೂಡ ಕಾರಣ ಎಂದು ಆ ವ್ಯಕ್ತಿಗೆ ಮನಗಾಣಿಸುವಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು.  ಈ ಘಟನೆ  ನನಗೆ ಹಠಾತ್ತಾಗಿ ನೆನಪಾಗಿದ್ದಕ್ಕೆ ಕಾರಣ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿವಸದ ಧ್ಯೇಯ ವಾಕ್ಯ: "ಅಸಮಾನತೆಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ".... ಅಸಮಾನತೆ ಎಂಬ ಪಿಡುಗು ಮನುಕುಲದ ಇತಿಹಾಸದ ಪ್ರತಿ ಪುಟದಲ್ಲೂ ತನ್ನ ಕರಿ ನೆರಳನ್ನು ಚೆಲ್ಲಿದೆ. ಸಾಮಾಜಿಕ ಅಸಮಾನತೆ, ಧಾರ್ಮಿಕ ಅಸಮಾನತೆ, ಆರ್ಥಿಕ ಅಸಮಾನತೆ ಹೀಗೆ ಜಗತ್ತಿನ