Posts

Showing posts from October, 2022

ಮಾನಸಿಕ ಆರೋಗ್ಯದ ಪಯಣ: ಸಾಗಿ ಬಂದ ದಾರಿ ಎಷ್ಟು? ಸಾಗಬೇಕಾಗಿರುವದೆಷ್ಟು?

Image
  ಕಳೆದ ವರ್ಷದ ವಿಶ್ವ ಮಾನಸಿಕ ಅರೋಗ್ಯ  ದಿನದ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೆ ಅಕ್ಟೋಬರ್ ೧೦ ಬಂದಿದೆ. ಹೋದ ವರ್ಷ ಇದೇ ಅಕ್ಟೋಬರ್ ೧೦ ರಂದು ನೆರೆದ ನಾಲ್ಕಾರು ಜನಗಳ ಮುಂದೆ ಮನಸಿಕೆ ಆರೋಗ್ಯದ ಮಹತ್ವ ಸಾರಿ ಬೆನ್ನು ತಟ್ಟಿಸಿಕೊಂಡು, ಎದೆ ಉಬ್ಬಿಸಿಕೊಂಡು, ಇಡ್ಲಿ ವಡೆ ಭುಂಜಿಸಿ ಮನೆಗೆ ಹಿಂತಿರುಗಿತ್ತಿದ್ದಾಗ ಮತ್ತದೇ ಹುಡುಗ ಧುತ್ತನೇ ಎದುರಾದ...ಸ್ನಾನ ಕಾಣದ ಕೊಳಕು ಮೈ, ತನ್ನಷ್ಟಕ್ಕೆ ತಾನೇ ನಗುತ್ತ, ಕೈ ಸನ್ನೆ ಮಾಡುತ್ತಾ, ಏನೇನನ್ನೋ ಅರಚುತ್ತಾ ನನ್ನ ಕಾರಿನ ಮುಂದೆ ಹಾಯ್ದು ಹೋದ. ಆ ದೃಶ್ಯವು ನನ್ನಲ್ಲಿ ಬೆಳಗ್ಗಿನ ಕಾರ್ಯಕ್ರಮದ "ಯಶಸ್ವೀ ಭಾವ" ಮೂಡಿಸಿದ್ದ ಜಂಭವನ್ನು ಹೊಸಕಿ ಹಾಕಿ ಬಿಟ್ಟಿತು, ಆತ್ಮವಿಮರ್ಶೆಗೆ ಎಡೆ ಮಾಡಿ ಕೊಟ್ಟಿತು. ಹೌದು, ಕಳೆದ ೩-೪ ದಶಕಗಲ್ಲಿ ಮನೋರೋಗಗಳ ಚಿಕಿತ್ಸೆ, ಮಾನಸಿಕ ಆರೋಗ್ಯದ ಸಂಬಂಧ ಪಟ್ಟ ಸಂಶೋಧನೆಗಳು ತ್ವರಿತ ಗತಿಯಲ್ಲಿ ವಿಕಾಸವಾಗಿವೆ. ಜನಸಾಮಾನ್ಯರಲ್ಲಿ ಮನೋರೋಗಗಳ ಬಗ್ಗೆ ಇದ್ದ ಮೌಢ್ಯವೂ ತಕ್ಕ ಮಟ್ಟಿಗೆ  ಇಳಿಮುಖವಾಗಿದೆ. ಮನೋರೋಗಗಳು ಹಾಗೂ ಮನೋರೋಗಿಗಳ ಬಗ್ಗೆ ಇದ್ದ "ಅಸ್ಪೃಶ್ಯತಾ ಭಾವ" ಕೊಂಚ ತಗ್ಗಿದೆ. ಆದರೂ.....ಮೂಢ ನಂಬಿಕೆಗಳೂ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ವಿಶೇಷವಾಗಿ ಹಳ್ಳಿಗಾಡಿನ ಜನರಲ್ಲಿ ಭೂತ ಪ್ರೇತ, ಮಾಟ ಮಂತ್ರಗಳೇ ಮನೋರೋಗಕ್ಕೆ ಕಾರಣ ಎಂಬ ನಂಬಿಕೆ ಇನ್ನೂ ಇದೇ. ಮನೋರೋಗಗಳ ಬಗ್ಗೆ ಇರುವಷ್ಟೇ ತಪ್ಪು ಕಲ್ಪನೆಗಳು ಅವುಗಳ ಚಿಕಿತ್ಸೆಯ ಬಗ್ಗೆಯೂ  ಇದೆ