Posts

How Diabetes Impact our Psychological Health

             On November 14, world diabetes day is celebrated globally to raise awareness and provide education about diabetes. E very year World D iabetes D ay is celebrated with a theme to highlight the importance of this day and this year theme is ‘Access To Diabetes Care’ which aims to ensure access to treatment and care and reduce the risk of diabetes. In this article we are focusing on major psychological aspects that are affected in patient with diabetics Diabetics and psychological health Diabetics is a chronic disease that occurs when the level of glucose in the blood (blood sugar) is too high. Glu cose in your blood is the main source of energy that comes from the food you intake. Insulin is a hormone produced by the pancreas, helps glucose from the food get into cells to be used as energy. If the body does not make enough insulin or use it well. This keeps the glucose in the blood and does not get into the cells however too much glucose in the blood can adversely p

ಸಿಹಿ ಮನಸ್ಸು ಮಧುಮೇಹಕ್ಕೆ ಹಿತ!!

Image
ಹೌದು.ಮಧುಮೇಹವನ್ನು ನಿಯಂತ್ರಿಸಲು ಬಾಯಲ್ಲಿ ಸಿಹಿ ಬೇಡ ಆದರೆ ಮನಸಲ್ಲಿ ಸಿಹಿ ಇರಲೇಬೇಕು. ಅರ್ಥ ಅಗ್ಲಿಲ್ಲವೇ? ತಿಳಿ ಹೇಳ್ತೀನಿ.  ಡಯಾಬಿಟಿಸ್ ನ ನಿಯಂತ್ರಣಕ್ಕೆ ದೈಹಿಕ ಅರೋಗ್ಯ ಎಷ್ಟು ಮುಖ್ಯನೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಮಾನಸಿಕ ಒತ್ತಡ, ಖಿನ್ನತೆ (ಡಿಪ್ರೆಶನ್), ಆತಂಕ ಗಳಂತಹ ಸಮಸ್ಯೆಗಳು ಡಯಾಬಿಟಿಸ್ ನ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆಂಬುದು ಸಂಶೋಧನೆಗಳಿಂದ ಧೃಡವಾಗಿದೆ. ಮಾನಸಿಕ ಸಮಸ್ಯೆಗಳಿಂದ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರದೇ ಇರುವದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಇದಕ್ಕೆ ಕಾರಣ ಹಲವಾರು. ಮಾನಸಿಕ ಸಮಸ್ಯೆಗಳಿಂದ ನಮ್ಮ ರಕ್ತದಲ್ಲಾಗುವ ಹಾರ್ಮೋನ್ ಏರುಪೇರುಗಳು, ಮುಖ್ಯವಾಗಿ ಕಾರ್ಟಿಸೋಲ್ ಎನ್ನುವ ಹಾರ್ಮೋನ್ ಹೆಚ್ಚಾದಾಗ ಶುಗರ್ ಮಟ್ಟ ಹೆಚ್ಚಾಗುವದು ವೈಜ್ನ್ಯಾನಿಕವಾಗಿ ಧೃಡ ಪಟ್ಟಿದೆ. ಇದಲ್ಲದೆ ಡಿಪ್ರೆಶನ್ ನಂತಹ ಮಾನಸಿಕ ರೋಗದಿಂದ ಬಳಲುವ ವ್ಯಕ್ತಿಯಲ್ಲಿ ಕಂಡುಬರುವ ನಿರಾಶೆ, ನಿರುತ್ಸಾಹದಂತಹ ಲಕ್ಷಣಗಳಿಂದಾಗಿ ಚಿಕಿತ್ಸೆಯನ್ನು ಸರಿಯಾಗಿ ಮಾಡದೆ ಅಗತ್ಯ                                  ಜೀವನಶೈಲಿಯ ಬದಲಾವಣೆಗಳನ್ನು ಮಾಡದೇ ರೋಗ  ಉಲ್ಭಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಹೀಗಾಗಿ ಮಧಿಮೇಹಿಗಳು ಕೇವಲ ತಮ್ಮ ದೈಹಿಕ ಆರೋಗ್ಯದ ಕಡೆ ಗಮನ ಕೊಡದೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವತ್ತ ಲಕ್ಷ್ಯ ಕೊಡಬೇಕು. ಅಗತ್ಯ ಬಿದ್ದಾಗ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆಯಲು ಹಿಂಜರಿತ ಬೇಡ. ರಕ

ಮಾನಸಿಕ ಆರೋಗ್ಯದ ಪಯಣ: ಸಾಗಿ ಬಂದ ದಾರಿ ಎಷ್ಟು? ಸಾಗಬೇಕಾಗಿರುವದೆಷ್ಟು?

Image
  ಕಳೆದ ವರ್ಷದ ವಿಶ್ವ ಮಾನಸಿಕ ಅರೋಗ್ಯ  ದಿನದ ನೆನಪು ಇನ್ನೂ ಹಸಿಯಾಗಿರುವಾಗಲೇ ಮತ್ತೆ ಅಕ್ಟೋಬರ್ ೧೦ ಬಂದಿದೆ. ಹೋದ ವರ್ಷ ಇದೇ ಅಕ್ಟೋಬರ್ ೧೦ ರಂದು ನೆರೆದ ನಾಲ್ಕಾರು ಜನಗಳ ಮುಂದೆ ಮನಸಿಕೆ ಆರೋಗ್ಯದ ಮಹತ್ವ ಸಾರಿ ಬೆನ್ನು ತಟ್ಟಿಸಿಕೊಂಡು, ಎದೆ ಉಬ್ಬಿಸಿಕೊಂಡು, ಇಡ್ಲಿ ವಡೆ ಭುಂಜಿಸಿ ಮನೆಗೆ ಹಿಂತಿರುಗಿತ್ತಿದ್ದಾಗ ಮತ್ತದೇ ಹುಡುಗ ಧುತ್ತನೇ ಎದುರಾದ...ಸ್ನಾನ ಕಾಣದ ಕೊಳಕು ಮೈ, ತನ್ನಷ್ಟಕ್ಕೆ ತಾನೇ ನಗುತ್ತ, ಕೈ ಸನ್ನೆ ಮಾಡುತ್ತಾ, ಏನೇನನ್ನೋ ಅರಚುತ್ತಾ ನನ್ನ ಕಾರಿನ ಮುಂದೆ ಹಾಯ್ದು ಹೋದ. ಆ ದೃಶ್ಯವು ನನ್ನಲ್ಲಿ ಬೆಳಗ್ಗಿನ ಕಾರ್ಯಕ್ರಮದ "ಯಶಸ್ವೀ ಭಾವ" ಮೂಡಿಸಿದ್ದ ಜಂಭವನ್ನು ಹೊಸಕಿ ಹಾಕಿ ಬಿಟ್ಟಿತು, ಆತ್ಮವಿಮರ್ಶೆಗೆ ಎಡೆ ಮಾಡಿ ಕೊಟ್ಟಿತು. ಹೌದು, ಕಳೆದ ೩-೪ ದಶಕಗಲ್ಲಿ ಮನೋರೋಗಗಳ ಚಿಕಿತ್ಸೆ, ಮಾನಸಿಕ ಆರೋಗ್ಯದ ಸಂಬಂಧ ಪಟ್ಟ ಸಂಶೋಧನೆಗಳು ತ್ವರಿತ ಗತಿಯಲ್ಲಿ ವಿಕಾಸವಾಗಿವೆ. ಜನಸಾಮಾನ್ಯರಲ್ಲಿ ಮನೋರೋಗಗಳ ಬಗ್ಗೆ ಇದ್ದ ಮೌಢ್ಯವೂ ತಕ್ಕ ಮಟ್ಟಿಗೆ  ಇಳಿಮುಖವಾಗಿದೆ. ಮನೋರೋಗಗಳು ಹಾಗೂ ಮನೋರೋಗಿಗಳ ಬಗ್ಗೆ ಇದ್ದ "ಅಸ್ಪೃಶ್ಯತಾ ಭಾವ" ಕೊಂಚ ತಗ್ಗಿದೆ. ಆದರೂ.....ಮೂಢ ನಂಬಿಕೆಗಳೂ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ವಿಶೇಷವಾಗಿ ಹಳ್ಳಿಗಾಡಿನ ಜನರಲ್ಲಿ ಭೂತ ಪ್ರೇತ, ಮಾಟ ಮಂತ್ರಗಳೇ ಮನೋರೋಗಕ್ಕೆ ಕಾರಣ ಎಂಬ ನಂಬಿಕೆ ಇನ್ನೂ ಇದೇ. ಮನೋರೋಗಗಳ ಬಗ್ಗೆ ಇರುವಷ್ಟೇ ತಪ್ಪು ಕಲ್ಪನೆಗಳು ಅವುಗಳ ಚಿಕಿತ್ಸೆಯ ಬಗ್ಗೆಯೂ  ಇದೆ

Brain health day blog: Healthy brain aging

  Every year on July 22 nd , world brain day is celebrated worldwide. the goal of this day is to bring awareness about the importance of brain health as it is a crucial part for our wellbeing. Brain is one the largest and complex organ which helps function different cognitive processes like thinking, memory, knowing and remembering. Memory is essential to all our lives. Without memory we cannot carry on our daily life. Memory is a mental process that has ability to store millions of data, to retain and recall information concerning daily life. A good memory is a valuable skill. If you have good memory your quality-of-life increases. If your memory declines the quality of life will also decrease. Having good memory is important in life from learning to applying the knowledge in present and future. Causes for poor memory Normal aging can cause poor memory or forgetting but cannot lead to drastic memory loss. In such cases can be due to other factors given below ·         Head injury - A

ದುರ್ಘಟನೆಯ ಕಹಿನೆನಪು ದುಃಸ್ವಪ್ನವಾಗಿ ಕಾಡಿದಾಗ...

Image
ನಮ್ಮ ಮನಸ್ಸಿಗೆ  ಒಂದು ವಿಶೇಷ ಗುಣವಿದೆ, ಅದೇನೆಂದರೆ, ಬೇಡವಾದ ನೆನಪುಗಳನ್ನು ಸ್ತುಪ್ತ ಮನಸ್ಸೆಂಬ ಚಾಪೆಯ ಕೆಳಗೆ ಗುಡಿಸಿಬಿಡುವದು . ಈ ವಿಶೇಷ ಗುಣದ ಕೃಪೆಯಿಂದ ಅನೇಕ ಕಹಿನೆನಪುಗಳು  ದಿನಕಳೆದಂತೆ ಜಾಗ್ರತ ಮನಸ್ಸಿನಿಂದ ಮರೆಯಾಗಿ ನಾವವನ್ನು "ಮರೆತು ಬಿಡುತ್ತೇವೆ". ಆದರೆ ಕೆಲವೊಂದು ಕರಾಳ ಘಟನೆಗಳು ಕೆಲವೊಮ್ಮೆ ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ  ಹಾಗೆ ಕುಳಿತು ನಮ್ಮ ಮನಶಾಂತಿಯನ್ನ ಕದಡಿಬಿಡುತ್ತವೆ. ಅಂತಹ ಒಂದು ಮಾನಸಿಕ ಅನಾರೋಗ್ಯಕ್ಕೆ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ (Post Traumatic Stress Disorder , PTSD )  ಎಂದು ಹೆಸರು.                                                                                        ****** ಡಿಸೆಂಬರ್ ೨೬, ೨೦೦೪. ರವಿ ತನ್ನ ಪ್ರೀತಿಯ ಮಡದಿ  ಮತ್ತು ಮುದ್ದು ಮಗಳೊಂದಿಗೆ ಚೆನ್ನೈ ನ ಮರೀನಾ ಬೀಚ್ ನಲ್ಲಿ ವಿಹರಿಸುತ್ತಿದ್ದ. ಆಗ ಅಚಾನಕ್ಕಾಗಿ ಅಪ್ಪಳಿಸಿದ ಸುನಾಮಿ ಅಲೆಗಳು  ಅವನ ಕಣ್ಣೆದುರೇ ಅವನ ಮಡದಿ ಮತ್ತು ಮಗುವನ್ನು ಮರಳಿ ಬಾರದ ಲೋಕಕ್ಕೆ ಎಳೆದೊಯ್ದವು.  ಈ ಘಟನೆ ನಡೆದು ಈಗ ಒಂದೂವರೆ ವರ್ಷಗಳಾಗಿವೆ. ಆ ಘಟನೆಯಿಂದ ಚೇತರಿಸಿಕೊಳ್ಳಲು ಇನ್ನೂ ರವಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ರಾತ್ರಿ ಕನಸಲ್ಲಿ ಅವನಿಗೆ ಸಾಗರದಲೆಯಲ್ಲಿ ಕೊಚ್ಚಿ ಹೋದ ತನ್ನ ಹೆಂಡತಿ ಮತ್ತು ಮಗುವಿನ ಭಯಭೀತ ಮುಖಗಳು ಕಾಡುತ್ತವೆ, ಅವರ ಆರ್ತನಾದ ಕೇಳುತ್ತದೆ, ಅವನು ಧುತ್ತೆಂದ

"ಹೆಣ್ಮಕ್ಕಳಲ್ಲೇ ಮನೋರೋಗಗಳು ಹೆಚ್ಚಾ ಸಾರ್?"

Image
  ಈ ಪ್ರಶ್ನೆ ಕಿವಿಗೆ ಬಿದ್ದಾಗ ನನಗೆ ಕಿರಿಕಿರಿ ಆಗಿದ್ದು ಸಹಜ. ನನ್ನ ಜೊತೆಗಿದ್ದ ಹುಡುಗಿ, ನನ್ನ ಸಹಾಯಕ ವೈದ್ಯೆಯ ಸಿಟ್ಟು ಯಾರಿಗಾದರೂ ಗೋಚರವಾಗುವಂತಿತ್ತು. ಈ ಪ್ರಶ್ನೆ ಕೇಳಿದ್ದು ಒಬ್ಬ ಉಪದ್ಯಾಪಿ ಗಂಡಸು. ಅದೂ ಡಿಪ್ರೆಶನ್ ನಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಹೀಯಾಳಿಸುವ ಭರದಲ್ಲಿ. ನನ್ನ ಕಿರಿಕಿರಿಯನ್ನು ತೋರಗೊಡದೆ ಆದಷ್ಟು ಸಂಯಮದಿಂದ ನಾನು ಆ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿದೆ. ಎಲ್ಲಾ  ಮಾನಸಿಕ ರೋಗಗಳೂ ಹೆಣ್ಣುಮಕ್ಕಳಲ್ಲೇ ಹೆಚ್ಚಾಗಿ ಕಂಡು ಬರುತ್ತವೆ ಎಂಬುದು ಶುದ್ಧ ಸುಳ್ಳು, ಕೆಲವೊಂದು ರೋಗಗಳು ಪುರುಷರಲ್ಲೇ ಹೆಚ್ಚಾಗಿರುತ್ತವೆ ಎಂದೂ, ಹಾಗೂ ಹೆಣ್ಣುಮಕ್ಕಳಲ್ಲಿ ಕೆಲವೊಂದು ರೋಗಗಳು ಹೆಚ್ಚಾಗಿ ಕಂಡುಬಂದರೆ ಅದಕ್ಕೆ ಪ್ರಕೃತಿದತ್ತವಾಗಿ ಬಂದ ಕೆಲವೊಂದು ಜೈವಿಕ ತಾರತಮ್ಯಗಳು ಕಾರಣವಾದರೆ ಇನ್ನೂ ಕೆಲವೊಮ್ಮೆ ಸ್ತ್ರೀಯರು ಅನಾದಿ ಕಾಲದಿಂದಲೂ ಅನುಭವಿಸುತ್ತಿರುವ ಸಾಮಾಜಿಕ ಅಸಮಾನತೆ ಕೂಡ ಕಾರಣ ಎಂದು ಆ ವ್ಯಕ್ತಿಗೆ ಮನಗಾಣಿಸುವಷ್ಟರಲ್ಲಿ ನನಗೆ ಸಾಕು ಸಾಕಾಗಿ ಹೋಗಿತ್ತು.  ಈ ಘಟನೆ  ನನಗೆ ಹಠಾತ್ತಾಗಿ ನೆನಪಾಗಿದ್ದಕ್ಕೆ ಕಾರಣ ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿವಸದ ಧ್ಯೇಯ ವಾಕ್ಯ: "ಅಸಮಾನತೆಯ ಜಗತ್ತಿನಲ್ಲಿ ಮಾನಸಿಕ ಆರೋಗ್ಯ".... ಅಸಮಾನತೆ ಎಂಬ ಪಿಡುಗು ಮನುಕುಲದ ಇತಿಹಾಸದ ಪ್ರತಿ ಪುಟದಲ್ಲೂ ತನ್ನ ಕರಿ ನೆರಳನ್ನು ಚೆಲ್ಲಿದೆ. ಸಾಮಾಜಿಕ ಅಸಮಾನತೆ, ಧಾರ್ಮಿಕ ಅಸಮಾನತೆ, ಆರ್ಥಿಕ ಅಸಮಾನತೆ ಹೀಗೆ ಜಗತ್ತಿನ

Know Dementia, Know Alzheimer's

Image
  Every year on September 21, World Alzheimer,s day is observed globally. Each year there is a theme based on which an awareness is created about the disease. And this year the theme is Know Dementia, Know Alzeihmer. According to WHO , worldwide more than 50 million people suffer with dementia   . Alzheimer's disease is one of the types of dementia and the prevalence is recorded to be more than 24 million. In India as per the dementia in India 2020 reports ,5.3million people have dementia and more than 4million people suffer from Alzheimer's disease What is dementia and Alzheimer's disease? Dementia is an illness that affects Senior citizens. Dementia is more commonly seen in people who are older than 65. Alzheimer's disease is a common type of dementia. According to research around 60% -80% people with dementia have Alzheimer's disease. Dementia is n neurological disorder that cause damage to brain cells and the part of brain which is responsible for other co