Posts

Showing posts from June, 2022

ದುರ್ಘಟನೆಯ ಕಹಿನೆನಪು ದುಃಸ್ವಪ್ನವಾಗಿ ಕಾಡಿದಾಗ...

Image
ನಮ್ಮ ಮನಸ್ಸಿಗೆ  ಒಂದು ವಿಶೇಷ ಗುಣವಿದೆ, ಅದೇನೆಂದರೆ, ಬೇಡವಾದ ನೆನಪುಗಳನ್ನು ಸ್ತುಪ್ತ ಮನಸ್ಸೆಂಬ ಚಾಪೆಯ ಕೆಳಗೆ ಗುಡಿಸಿಬಿಡುವದು . ಈ ವಿಶೇಷ ಗುಣದ ಕೃಪೆಯಿಂದ ಅನೇಕ ಕಹಿನೆನಪುಗಳು  ದಿನಕಳೆದಂತೆ ಜಾಗ್ರತ ಮನಸ್ಸಿನಿಂದ ಮರೆಯಾಗಿ ನಾವವನ್ನು "ಮರೆತು ಬಿಡುತ್ತೇವೆ". ಆದರೆ ಕೆಲವೊಂದು ಕರಾಳ ಘಟನೆಗಳು ಕೆಲವೊಮ್ಮೆ ನಮ್ಮ ಸ್ಮೃತಿಪಟಲದಲ್ಲಿ ಅಚ್ಚೊತ್ತಿದ  ಹಾಗೆ ಕುಳಿತು ನಮ್ಮ ಮನಶಾಂತಿಯನ್ನ ಕದಡಿಬಿಡುತ್ತವೆ. ಅಂತಹ ಒಂದು ಮಾನಸಿಕ ಅನಾರೋಗ್ಯಕ್ಕೆ ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ ಡಿಸ್ಆರ್ಡರ್ (Post Traumatic Stress Disorder , PTSD )  ಎಂದು ಹೆಸರು.                                                                                        ****** ಡಿಸೆಂಬರ್ ೨೬, ೨೦೦೪. ರವಿ ತನ್ನ ಪ್ರೀತಿಯ ಮಡದಿ  ಮತ್ತು ಮುದ್ದು ಮಗಳೊಂದಿಗೆ ಚೆನ್ನೈ ನ ಮರೀನಾ ಬೀಚ್ ನಲ್ಲಿ ವಿಹರಿಸುತ್ತಿದ್ದ. ಆಗ ಅಚಾನಕ್ಕಾಗಿ ಅಪ್ಪಳಿಸಿದ ಸುನಾಮಿ ಅಲೆಗಳು  ಅವನ ಕಣ್ಣೆದುರೇ ಅವನ ಮಡದಿ ಮತ್ತು ಮಗುವನ್ನು ಮರಳಿ ಬಾರದ ಲೋಕಕ್ಕೆ ಎಳೆದೊಯ್ದವು.  ಈ ಘಟನೆ ನಡೆದು ಈಗ ಒಂದೂವರೆ ವರ್ಷಗಳಾಗಿವೆ. ಆ ಘಟನೆಯಿಂದ ಚೇತರಿಸಿಕೊಳ್ಳಲು ಇನ್ನೂ ರವಿಗೆ ಸಾಧ್ಯವಾಗುತ್ತಿಲ್ಲ. ಪ್ರತಿ ರಾತ್ರಿ ಕನಸಲ್ಲಿ ಅವನಿಗೆ ಸಾಗರದಲೆಯಲ್ಲಿ ಕೊಚ್ಚಿ ಹೋದ ತನ್ನ ಹೆಂಡತಿ ಮತ್ತು ಮಗುವಿನ ಭಯಭೀತ ಮುಖಗಳು ಕಾಡುತ್ತವೆ, ಅವರ ಆರ್ತನಾದ ಕೇಳುತ್ತದೆ, ಅವನು ಧುತ್ತೆಂದ