ಸಿಹಿ ಮನಸ್ಸು ಮಧುಮೇಹಕ್ಕೆ ಹಿತ!!
ಹೌದು.ಮಧುಮೇಹವನ್ನು ನಿಯಂತ್ರಿಸಲು ಬಾಯಲ್ಲಿ ಸಿಹಿ ಬೇಡ ಆದರೆ ಮನಸಲ್ಲಿ ಸಿಹಿ ಇರಲೇಬೇಕು. ಅರ್ಥ ಅಗ್ಲಿಲ್ಲವೇ? ತಿಳಿ ಹೇಳ್ತೀನಿ.
ಡಯಾಬಿಟಿಸ್ ನ ನಿಯಂತ್ರಣಕ್ಕೆ ದೈಹಿಕ ಅರೋಗ್ಯ ಎಷ್ಟು ಮುಖ್ಯನೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಮಾನಸಿಕ ಒತ್ತಡ, ಖಿನ್ನತೆ (ಡಿಪ್ರೆಶನ್), ಆತಂಕ ಗಳಂತಹ ಸಮಸ್ಯೆಗಳು ಡಯಾಬಿಟಿಸ್ ನ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆಂಬುದು ಸಂಶೋಧನೆಗಳಿಂದ ಧೃಡವಾಗಿದೆ. ಮಾನಸಿಕ ಸಮಸ್ಯೆಗಳಿಂದ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರದೇ ಇರುವದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಇದಕ್ಕೆ ಕಾರಣ ಹಲವಾರು. ಮಾನಸಿಕ ಸಮಸ್ಯೆಗಳಿಂದ ನಮ್ಮ ರಕ್ತದಲ್ಲಾಗುವ ಹಾರ್ಮೋನ್ ಏರುಪೇರುಗಳು, ಮುಖ್ಯವಾಗಿ ಕಾರ್ಟಿಸೋಲ್ ಎನ್ನುವ ಹಾರ್ಮೋನ್ ಹೆಚ್ಚಾದಾಗ ಶುಗರ್ ಮಟ್ಟ ಹೆಚ್ಚಾಗುವದು ವೈಜ್ನ್ಯಾನಿಕವಾಗಿ ಧೃಡ ಪಟ್ಟಿದೆ. ಇದಲ್ಲದೆ ಡಿಪ್ರೆಶನ್ ನಂತಹ ಮಾನಸಿಕ ರೋಗದಿಂದ ಬಳಲುವ ವ್ಯಕ್ತಿಯಲ್ಲಿ ಕಂಡುಬರುವ ನಿರಾಶೆ, ನಿರುತ್ಸಾಹದಂತಹ ಲಕ್ಷಣಗಳಿಂದಾಗಿ ಚಿಕಿತ್ಸೆಯನ್ನು ಸರಿಯಾಗಿ ಮಾಡದೆ ಅಗತ್ಯ
ಜೀವನಶೈಲಿಯ ಬದಲಾವಣೆಗಳನ್ನು ಮಾಡದೇ ರೋಗ ಉಲ್ಭಣಿಸಿಕೊಳ್ಳುವ ಸಾಧ್ಯತೆಗಳಿರುತ್ತೆ. ಹೀಗಾಗಿ ಮಧಿಮೇಹಿಗಳು ಕೇವಲ ತಮ್ಮ ದೈಹಿಕ ಆರೋಗ್ಯದ ಕಡೆ ಗಮನ ಕೊಡದೆ ಮಾನಸಿಕ ಆರೋಗ್ಯವನ್ನೂ ಕಾಪಾಡಿಕೊಳ್ಳುವತ್ತ ಲಕ್ಷ್ಯ ಕೊಡಬೇಕು. ಅಗತ್ಯ ಬಿದ್ದಾಗ ಮನೋವೈದ್ಯರಿಂದ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆ ಪಡೆಯಲು ಹಿಂಜರಿತ ಬೇಡ. ರಕ್ತದಲ್ಲಿ ಸಿಹಿ ಬೇಡ ಆದರೆ ಮನಸ್ಸಿನಲ್ಲಿ ಧಾರಾಳವಾಗಿ ಸಿಹಿ ತುಂಬಿಕೊಳ್ಳಿ. ಮನಸಿನ ಕಹಿಗಳನ್ನು ನಿವಾರಿಸಿಕೊಳ್ಳಿ. ವಿಶ್ವ ಮಧುಮೇಹ ದಿನದಂದು ನಿಮ್ಮಲ್ಲರಿಗೆ ಉತ್ತಮ ಆರೋಗ್ಯವನ್ನು ಹಾರೈಸುವೆ.
ಡಾ.ಭೀಮಸೇನ ಟಕ್ಕಳಕಿ
ಮನೋರೋಗ ತಜ್ನ್ಯರು
ಬೆಳಗಾವಿ
Comments
Post a Comment